ಸಾಮಾಜಿಕ ಗುಂಪುಗಳ ಅಧ್ಯಯನವೇ ಸಮಾಜಶಾಸ್ತ್ರ . ಗುಂಪುಗಳೆಂದರೆ ಜನರ ಸಮೂಹ. ಈ ಜನರು ಪರಸ್ಪರರೊಡನೆ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ತೊಡತುವರು. ಈ ಕ್ರಿಯೆ-ಪ್ರತಿಕ್ರಿಯೆಗಳ ಸಂಕೀರ್ಣಸ್ವರೂಪವೇ ಅಂತಃಕ್ರಿಯೆ. ಅತ್ಯಂತ ಸರಳವಾಗಿ ಹೇಳಬೇಕೆಂದರೆ, ಸಮಾಜಶಾಸ್ತ್ರವು ಜನರನ್ನು ಅಧ್ಯಯನ ಮಾಡುವ ಒಂದು ಅಧ್ಯಯನ. ಜನರು ನಿರ್ದಿಷ್ಟ ರೀತಿಯಲ್ಲಿ ಏಕೆ ನಡೆದುಕೊಳ್ಳುತ್ತಾರೆಂದು ತಿಳಿಯಲು ಸಮಾಜಶಾಸ್ತ್ರಜ್ಞರು ಬಯಸುತ್ತಾರೆ. ಅಲ್ಲದೇ, ಅವರು ಗುಂಪುಗಳನ್ನು ಏಕೆ ಸೇರುತ್ತಾರೆ, ರೂಪಿಸುತ್ತಾರೆ, ಯಾವ ಕಾರಣಕ್ಕಾಗಿ ಶಾಂತಿಪ್ರಿಯರಾಗಿರುತ್ತಾರೆ ಅಥವಾ ಯುದ್ಧಗಳನ್ನು ಮಾಡುತ್ತಾರೆ, ಏಕೆ ದೇವರ ಆರಾಧನೆ ಮಾಡುವರು, ವಿವಾಹವಾಗುವರು ಅಥವಾ ಮತದಾನ ಮಾಡುವರು, ಕ್ರೀಡೆಗಳೇಕೆ ರಾಷ್ತ್ರೀಯತೆಯನ್ನು ಉತ್ತೇಜಿಸುತ್ತದೆ, ತಮ್ಮ ಸಹವಾಸಿಗಳನ್ನೇಕೆ “ನಮ್ಮವರು-ತಮ್ಮವರು” ಎಂದು ವರ್ಗೀಕರಿಸುತ್ತಾರೆಂಬುದನ್ನು ತಿಳಿಯಲು ಉತ್ಸಾಹ ತೋರುತ್ತಾರೆ. ಜನರು ಪರಸ್ಪರ ಅಂತಃಕ್ರಿಯೆಯಲ್ಲಿ ತೊಡಗಿದಾಗ ಏನೆಲ್ಲ ಆಗುತ್ತದೆಂಬುದನ್ನು ಅರಿಯಲು ಬಯಸುತ್ತಾರೆ. ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ, ಸಂಸ್ಥೆಗಳ ಮತ್ತು ಸಮುದಾಯದ ವೈಜ್ಞಾನಿಕ ಅಧ್ಯಯನ ಎನ್ನಬಹುದು. ಸಾಮಾಜಿಕ ಅಂತಃಕ್ರಿಯೆಯು ಗುಂಪುಗಳಲ್ಲಿ ಕಾಣಬರುವುದು. ಹಾಗಾಗಿ, ಸಮಾಜಶಾಸ್ತ್ರವು ಅಧ್ಯಯನ ಮಾಡುವ ವಿಷಯಗಳೆಂದರೆ: ೧. ಸಾಮಾಜಿಕ ಗುಂಪುಗಳ ಆಂತರಿಕ ಸ್ವರೂಪ ಸಂಘಟನೆಯ ವಿಧಾನಗಳು ೨. ಈ ಗುಂಪುಗಳ ಸಂಘಟನೆಯು ಯಾವ ...
ಸಮಾಜಶಾಸ್ತ್ರದ ಕೆಲವೊಂದು ವಿಷಯಗಳ ಬಗ್ಗೆ ಆಗಾಗ್ಗೆ ಮಾಡಿಕೊಂಡಂತಹ ಟಿಪ್ಪಣಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಹಾಗಾಗಿ ಅನೇಕ ಸಂದರ್ಭಗಳಲ್ಲಿ ಪರಾಮರ್ಶನ ಗ್ರಂಥದ ಬಗ್ಗೆ ಮಾಹಿತಿ ಇರುವುದಿಲ್ಲ. ಸಹಜವಾಗಿಯೇ, ನಾನು ಅನೇಕರ ಚಿಂತನೆಗಳನ್ನು ಎರವಲು ಪಡೆದಿದ್ದೇನೆ:)