ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಡಕ್ಲಿಫ್ ಬ್ರೌನ್ (Radcliffe-Brown)

ಆಲ್ಫ್ರೆಡ್ ರೆಜಿನಾಲ್ಡ್ ರಾಡಕ್ಲಿಫ್-ಬ್ರೌನ್ (Alfred Reginald Radcliffe-Brown) ಇಪ್ಪತ್ತನೆಯ ಶತಮಾನದ ಪ್ರಮುಖ ಸಾಮಾಜಿಕ ಮಾನವಶಾಸ್ತ್ರಜ್ಞರು. ಬ್ರಿಟಿಷ್ ಮೂಲದ ಬ್ರೌನ್ ಅವರು ಫ್ರಾನ್ಸನ ಸೈದ್ಧಾಂತಿಕ ಸಮಾಜಶಾಸ್ತ್ರವನ್ನು ಆಂಗ್ಲರಿಗೆ ಪರಿಚಯ ಮಾಡಿಕೊಟ್ಟಿದ್ದಲ್ಲದೇ, ಕ್ಷೇತ್ರಾಧ್ಯಯನಕ್ಕೆ ಅವಶ್ಯವಿರುವ ಸಮರ್ಪಕ ಪರಿಕಲ್ಪನೆಗಳನ್ನು ಒದಗಿಸಿದರು. ಅನೇಕ್ ವಿಶ್ವವಿದ್ಯಾನಿಲಯಗಳಲ್ಲಿ ಈ ಶಾಸ್ತ್ರದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದರು. ಪ್ರಥಮ ಮಹಾಯುದ್ಧಕ್ಕಿಂತ ಮೊದಲೇ, ಬ್ರೌನ್ ಅವರು ಡರ್ಖೀಂ ಅವರ ಪ್ರಭಾವಕ್ಕೆ ಒಳಗಾದರು. ಜನಾಂಗಶಾಸ್ತ್ರದ ಅಧ್ಯಯನಗಳಿಗೆ ಆತನ ಸಿದ್ಧಾಂತವನ್ನು ಹೇಗೆ ಆನ್ವಯಿಸಬಹುದು ಎಂಬುದನ್ನು ಪರಿಶೀಲಿಸುವುದು ಆತನ ಜೀವನದ ಉದ್ದೇಶವಾಯಿತು.  ಜೀವನ:     ಬರ್ಮಿಂಗಹಾಮಿನ ಸ್ಪಾರ್ಕಬ್ರೂಕ್ ಎಂಬ ಪ್ರದೇಶದಲ್ಲಿ ೧೮೮೧ರಂದು ಬ್ರೌನ್ ಜನಿಸಿದರು. ಕೇವಲ ಐದುವರ್ಷದ ಬಾಲಕನಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡ ಬ್ರೌನ್ ತಾಯಿಯ ಆರೈಕೆಯಲ್ಲಿ ಬೆಳೆದರು. ಅಣ್ಣನ ಪ್ರೋತ್ಸಾಹದಿಂದ, ಮಧ್ಯದಲ್ಲಿ ಬಿಟ್ಟ ವಿದ್ಯಾಭ್ಯಾಸವನ್ನು ಮುಂದುವರಿಸಿದ ಅವರು, ಬರ್ಮಿಂಗಹಾಮ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಪೂರ್ವ ಕೋರ್ಸ್ ಮಾಡಿದರು. ೧೯೦೨ರಲ್ಲಿ ಕೇಂಬಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ಬ್ರೌನ್, ಜೀವಶಾಸ್ತ್ರವನ್ನು ಅಧ್ಯಯನ ಮಾಡಬಯಸಿದರು; ಆದರೆ, ಅವರ ಟ್ಯೂಟರ್ ಅದಕ್ಕೆ...